ಕರೋನವೈರಸ್ (COVID-19) ಜಾಗತಿಕ ಸಾಂಕ್ರಾಮಿಕ ರೋಗವು ಜಗತ್ತಿನಾದ್ಯಂತ ಹರಡುತ್ತಿದ್ದು ನಾವು ಅಸಾಮಾನ್ಯವಾಗಿ ಸವಾಲಿನ ಸಮಯವನ್ನು ಎದುರಿಸುತ್ತಿದ್ದೇವೆ. ನಮ್ಮಲ್ಲಿ ಹೆಚ್ಚಿನವರು ದೈನಂದಿನ ಜೀವನದಲ್ಲಿ ನಾಟಕೀಯ ಬದಲಾವಣೆಗಳನ್ನು ಅನುಭವಿಸುತ್ತಿದ್ದೇವೆ. ಇಂತಹ ಸಮಯದಲ್ಲಿ, ನಮ್ಮ ಉತ್ಸಾಹ, ಆಂತರಿಕ ಸಮತೋಲನ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವುದು ಅತಿ ಮುಖ್ಯವಾಗಿದೆ, ಆದ್ದರಿಂದ ನಾವು ನಮ್ಮ ಸುತ್ತಲಿರುವ ಪ್ರತಿಯೊಬ್ಬರಿಗೂ ಬಲವಾದ ಮತ್ತು ಜೀವನವನ್ನು ಉನ್ನತಕ್ಕೇರಿಸುವ ಬೆಂಬಲವನ್ನು ಕೊಡಬಹುದು.

ಈ ನಿಟ್ಟಿನಲ್ಲಿ, ಸದ್ಗುರುಗಳು ಸರಳವಾದರೂ ಅಷ್ಟೇ ಪ್ರಬಲವಾದ ಮಾರ್ಗದರ್ಶಿ ಸಾಧನೆಯನ್ನು ನೀಡಿದ್ದಾರೆ, ಇದು ದೈನಂದಿನ ಅಭ್ಯಾಸವಾಗಿದ್ದು ಇದರಿಂದ ನಾವು ಪ್ರಯೋಜನ ಪಡೆಯಬಹುದು.

ದೈನಂದಿನ ಸಾಧನೆ(ಅಭ್ಯಾಸಗಳು) - ಎಲ್ಲರಿಗಾಗಿ

"ಯೋಗ ಯೋಗ ಯೋಗೇಶ್ವರಾಯ" ಪಠಣ (12 ಬಾರಿ) ನಂತರ ಈಶ ಕ್ರಿಯ ಧ್ಯಾನ

ಈ ಅಭ್ಯಾಸಗಳನ್ನು ಕಲಿಯುವುದು ಹೇಗೆ?

ಹಂತ 1: ಅಭ್ಯಾಸಗಳ ಮಹತ್ವದ ಬಗ್ಗೆ ತಿಳಿದುಕೊಳ್ಳಿ

 

ಹಂತ 2: "ಯೋಗ ಯೋಗ ಯೋಗೇಶ್ವರಾಯ" ಮಂತ್ರವನ್ನು ಕಲಿಯಿರಿ

 

ಹಂತ 3: ಈಶ ಕ್ರಿಯೆಯನ್ನು ಕಲಿತುಕೊಳ್ಳಿ

 

ಹಂತ 4: ದೈನಂದಿನ ಮಾರ್ಗದರ್ಶಿ ಅಭ್ಯಾಸ "ಯೋಗ ಯೋಗ ಯೋಗೇಶ್ವರಾಯ" ಪಠಣ ನಂತರ ಈಶ ಕ್ರಿಯ.

 

ಸಿಂಹ ಕ್ರಿಯಾ 

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ವೃದ್ಧಿಸಲು ಒಂದು ಸರಳವಾದ ಯೋಗಾಭ್ಯಾಸ.

ಈ ಸವಾಲಿನ ಸಮಯದಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಉಸಿರಾಟ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಸದ್ಗುರುಗಳು ಒಂದು ಸರಳ ಯೋಗಾಭ್ಯಾಸವನ್ನು ನೀಡಿದ್ದಾರೆ.

ಅಭ್ಯಾಸದ ನಿಯಮಗಳು

  1. ನಿಮ್ಮ ಹೊಟ್ಟೆ ಪೂರ್ತಿಯಾಗಿ ತುಂಬಿರಬಾರದು, ಸ್ವಲ್ಪ ಮಟ್ಟಿಗೆ ಹಸಿದಿರಬೇಕು. ನಿಮ್ಮ ಕೊನೆಯ ಊಟ ಮತ್ತು ಅಭ್ಯಾಸದ ನಡುವೆ ಎರಡೂವರೆ ಗಂಟೆಗಳ ಅಂತರವಿರಲಿ.

  2. ತಮ್ಮ ದೈಹಿಕ ಆರೋಗ್ಯ ಪರಿಸ್ಥಿತಿಯ ಹೊರತಾಗಿಯೂ 6 ರಿಂದ 70 ವರ್ಷದೊಳಗಿನ ಯಾರಾದರೂ ಈ ಅಭ್ಯಾಸವನ್ನು ಮಾಡಬಹುದು.

  3. 6 ವರ್ಷಕ್ಕಿಂತ ಕೆಳಗಿರುವವರು ಮತ್ತು 70 ವರ್ಷ ದಾಟಿರುವವರು ಸಹ ಈ ಅಭ್ಯಾಸವನ್ನು ಮಾಡಬಹುದು, ಆದರೆ ಅವರು ಉಸಿರಾಟವನ್ನು ಕೇವಲ 12 ಬಾರಿ ಮಾತ್ರವೇ ಮಾಡಬೇಕು (21 ಬಾರಿ ಬೇಡ).

  4. ಮೆದುಳಿನಲ್ಲಿ ರಕ್ತಸ್ರಾವ ಅಥವಾ ಗಡ್ಡೆಯನ್ನು ಹೊಂದಿರುವವರು ಸಹ ಈ ಅಭ್ಯಾಸವನ್ನು ಮಾಡಬಹುದು, ಆದರೆ ಅವರು ಉಸಿರಾಟವನ್ನು ಕೇವಲ 12 ಬಾರಿ ಮಾತ್ರವೇ ಮಾಡಬೇಕು (21 ಬಾರಿ ಬೇಡ).

 

 

ಶಾಂಭವಿ ಮಹಾ ಮುದ್ರ ಕ್ರಿಯಾಕ್ಕೆ ದೀಕ್ಷೆ ಪಡೆದವರಿಗಾಗಿ 

ಯಾವುದೇ ಸವಾಲನ್ನು ಎದುರಿಸಿದಾಗ, ನಮ್ಮ ಬುದ್ಧಿವಂತಿಕೆ, ಆರೋಗ್ಯ, ಸಮತೋಲನ ಅತ್ಯಂತ ಮಹತ್ವದ್ದಾಗುತ್ತದೆ. ಅಂತರ್ಮುಖಿಯಾಗುವುದು ಇನ್ನೂ ಅಗತ್ಯವಾಗುತ್ತದೆ. ಆಂತರ್ಯದಲ್ಲಿ ಹೆಚ್ಚು ಉತ್ಸಾಹ ಮತ್ತು ಸ್ಥಿರತೆಯನ್ನು ಸೃಷ್ಟಿಸಲು ಈ ಸಂಪರ್ಕ ನಿಷೇಧಗೊಂಡ ಸಮಯವನ್ನು ನೀವು ಬಳಸಿಕೊಳ್ಳಲು ಬಯಸಿದರೆ, ನೀವು ಕ್ರಮಬದ್ಧವಾದ 40 ದಿನಗಳ ಸಾಧನಾ ಬೆಂಬಲಕ್ಕಾಗಿ ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ವಿವರಗಳೊಂದಿಗೆ ನೀವು ನೋಂದಾಯಿಸಿದರೆ, ಸದ್ಗುರುಗಳು ರೂಪಿಸಿದ ದೈನಂದಿನ ಅಭ್ಯಾಸದ ವೇಳಾಪಟ್ಟಿಯೊಂದಿಗ ನಿಮ್ಮನ್ನು ನಾವು ಸಂಪರ್ಕಿಸುತ್ತೇವೆ.

40 ದಿನಗಳ ಸಾಧನಾ ಬೆಂಬಲಕ್ಕಾಗಿ ಇಲ್ಲಿ ನೋಂದಾಯಿಸಿ.

(“ಪ್ರತಿದಿನದ ಸಾಧನೆ” ವಿಭಾಗದಲ್ಲಿ ನೀವು ಈಗಾಗಲೇ ನೋಂದಾಯಿಸಿದ್ದರೆ ಮತ್ತೆ ಆಗುವ ಅಗತ್ಯವಿಲ್ಲ)

 

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ

[email protected] (For USA and Canada)

[email protected] (For UK and Europe)

[email protected] (For Asia (except India) and Australia/New Zealand)

[email protected] (For Russian-speaking countries)

[email protected] (For India and the rest of the world)