FILTERS:
SORT BY:
ಎಲ್ಲರಿಗೂ ಮಾಹಿತಿಯು ಲಭ್ಯವಿರುವ ಈ ಜಗತ್ತಿನಲ್ಲಿ, ಶಿಕ್ಷಣವು ಸ್ಫೂರ್ತಿಯ ಮೂಲವಾಗಬೇಕೇ ಹೊರತು ಮಾಹಿತಿಯ ಶೇಖರಣೆಯಲ್ಲ.
ನಿಮ್ಮೊಳಗೆ ಯಾವಾಗಲೂ ಎರಡು ಮೂಲಭೂತ ಶಕ್ತಿಗಳು ಕಾರ್ಯಗೈಯುತ್ತಿವೆ: ತನ್ನನ್ನು ತಾನು ಉಳಿಸಿಕೊಳ್ಳುವ ಪ್ರವೃತ್ತಿ ಮತ್ತು ಮುಕ್ತರಾಗುವ ಹಾತೊರೆತ. ತನ್ನನ್ನು ತಾನು ಉಳಿಸಿಕೊಳ್ಳುವ ಪ್ರವೃತ್ತಿಯನ್ನು ನೀವು ಮೀರಿ ಹೋದರೆ, ನಿಮ್ಮ ದೇಹದ ಪ್ರತಿಯೊಂದು ಜೀವಕೋಶವೂ ನಿರಾಳತೆಯನ್ನು ಹೊಂದುವುದು.
ಜೀವಶಕ್ತಿಯಲ್ಲಿ ಲವಲವಿಕೆ, ಮನಸ್ಸಿನಲ್ಲಿ ತಾಜಾತನ, ಮತ್ತು ಹೃದಯದಲ್ಲಿ ಪ್ರೀತಿ – ಇಷ್ಟನ್ನು ನೀವು ನಿಮ್ಮಲ್ಲಿ ಕಾಪಾಡಿಕೊಂಡರೆ, ಪ್ರತಿದಿನವೂ ಒಂದು ಹೊಸ ರೋಚಕ ಪಯಣವಾಗುವುದು.
ನೀವು ಲಾಜಿಕ್, ಅಂದರೆ ತರ್ಕದ ಗುಲಾಮರಾದಾಗ, ಜೀವನದ ಮ್ಯಾಜಿಕ್ ಅನ್ನು ನೋಡಲಾರಿರಿ. ತರ್ಕದ ಮಿತಿಯನ್ನು ಮೀರಿ ತಮ್ಮ ಅಸ್ತಿತ್ವದ ನಿಜವಾದ ಮ್ಯಾಜಿಕ್ನತ್ತ ಜನರನ್ನು ಕೊಂಡೊಯ್ಯುವುದೇ ನನ್ನ ಕೆಲಸ.
ಜೀವನಕ್ಕಿಂತ ಮಿಗಿಲಾದ ಧ್ಯೇಯವಿಲ್ಲ.
ನೀವು ಸಿಟ್ಟು, ಕಹಿತನ, ಮತ್ತು ಹಗೆತನಗಳಿಂದ ಮುಕ್ತರಾಗಿದ್ದಾಗ, ನೀವು ಏನನ್ನೇ ಸ್ಪರ್ಶಿಸಿದರೂ ಪ್ರೀತಿಯಿಂದ ಸ್ಪರ್ಶಿಸುತ್ತೀರಿ.
ಸನ್ನಿವೇಶಗಳು ನೀವು ನಿಮ್ಮೊಳಗೆ ಹೇಗಿದ್ದೀರಿ ಎಂಬುದನ್ನು ನಿರ್ಧರಿಸದೆ, ನೀವೇ ಸನ್ನಿವೇಶಗಳು ಹೇಗಿರಬೇಕೆಂದು ನಿರ್ಧರಿಸಿದರೆ, ಅದೇ ಯಶಸ್ಸು.
ಜೀವನದಲ್ಲಿ ನೀವು ‘ಏನು’ ಮಾಡುತ್ತೀರಿ ಎಂಬುದು ಮುಖ್ಯವಲ್ಲ. ನೀವದನ್ನು ‘ಹೇಗೆ’ ಮಾಡುತ್ತೀರಿ ಎಂಬುದೇ ಅತ್ಯಂತ ಮುಖ್ಯ.
ಇಂದು ನೀವು ಹೇಗೆ ಯೋಚಿಸುತ್ತಿದ್ದೀರಿ, ಹೇಗೆ ಭಾವಿಸುತ್ತಿದ್ದೀರಿ, ಮತ್ತು ಜೀವನವನ್ನು ಹೇಗೆ ಗ್ರಹಿಸುತ್ತಿದ್ದೀರಿ ಎಂಬುದು ನಿಮ್ಮ ನಾಳೆಯನ್ನು ನಿರ್ಧರಿಸುತ್ತದೆ.
ಸ್ವೀಕರಿಸುವುದು ಹೇಗೆಂದು ಅರಿತಿರುವವರಿಗೆ ಜೀವನವು ಬಹಳ ಉದಾರವಾದುದು. ಯಾರು ಈ ಸ್ವೀಕೃತಿಯ ಪರಾಕಾಷ್ಠೆಯನ್ನು ತಲುಪುವರೋ ಅವರು ಧನ್ಯತೆಯನ್ನು ಅನುಭವಿಸುವರು. ಈ ಧನ್ಯಪೌರ್ಣಮಿಯಂದು, ಜೀವನದ ಉದಾರತೆಗೆ ನೀವು ತೆರೆದುಕೊಳ್ಳುವಂತಾಗಲಿ.
ನಾಳೆಯು ಎಂದೂ ಬರುವುದಿಲ್ಲ. ಇದುವೇ ಜೀವನದ ಸೊಬಗು: ನೀವು ಇಂದಿನ ದಿನವನ್ನು ನಿಭಾಯಿಸಲು ಕಲಿಯಬೇಕಷ್ಟೆ. ಒಮ್ಮೆಗೆ ಒಂದೇ ದಿನ, ಒಮ್ಮೆಗೆ ಒಂದೇ ಕ್ಷಣ.
ಸದೃಢವಾದ ರಾಷ್ಟ್ರವನ್ನು ಕಟ್ಟಬೇಕಾದರೆ, ನಾವದನ್ನು ಸ್ಪಷ್ಟವಾದ ಮುನ್ನೋಟ, ಬಾಧ್ಯತೆ, ಮತ್ತು ಸರಿಯಾದ ಕ್ರಮ ಕೈಗೊಳ್ಳುವ ದಿಟ್ಟತನಗಳಿಂದ ಪೋಷಿಸಬೇಕು. ಭಾರತವು ಜಗತ್ತಿನ ಅತ್ಯಂತ ಚೈತನ್ಯಯುತ ರಾಷ್ಟ್ರವಾಗಿ ಬೆಳೆಯಬೇಕಾದರೆ ಅದಕ್ಕೆ ನಮ್ಮಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಅಗತ್ಯ.